ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಆರು ಬಾರಿ ಮಾತ್ರ ಅವಕಾಶ ನೀಡುವ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು ಹೊಸಪದ್ಧತಿ ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆಗಳಿವೆ.
ಗುಣಮಟ್ಟ ಕಾಪಾಡುವ ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನುಂಟು ಮಾಡುವ ದೃಷ್ಟಿಯಿಂದ ಬದಲಾವಣೆ ತರಲು ಇಲಾಖೆ ಉದ್ದೇಶಿಸಿದೆ. ಈ ಸಂಬಂಧ ಶೀಘ್ರದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಇಲಾಖೆ ನಿರ್ಧರಿಸಿದೆ ಎಂದು ಉನ್ನತಮೂಲ `ಪ್ರಜಾವಾಣಿ`ಗೆ ತಿಳಿಸಿದೆ.
ಪ್ರತಿವರ್ಷ ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಸುಮಾರು 3 ಲಕ್ಷ ಜನ ಪಾಸಾದರೆ ಉಳಿದವರು ಅನುತ್ತೀರ್ಣರಾಗುತ್ತಾರೆ.ಅಲ್ಲದೆ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಅಲ್ಲೂ ಪಾಸಾಗದವರು ವಯೋಮಿತಿ ಆಧಾರದ ಮೇಲೆ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ.
ಆದರೆ ಈ ರೀತಿ ಪರೀಕ್ಷೆ ತೆಗೆದುಕೊಂಡವರ ಪೈಕಿ ಶೇ 5ರಷ್ಟು ಜನ ಪಾಸಾಗುವುದಿಲ್ಲ. ಫಲಿತಾಂಶ ತುಂಬ ಕಡಿಮೆ ಇರುತ್ತದೆ. ಗುಣಮಟ್ಟವೂ ಇರುವುದಿಲ್ಲ. ಇದನ್ನು ಮನಗಂಡು ಬದಲಾವಣೆ ತರುವುದು ಸೂಕ್ತ ಎಂಬುದು ಇಲಾಖೆಯ ಸಮರ್ಥನೆ. ಈ ರೀತಿ ನಿರ್ದಿಷ್ಟ ಗುರಿ ನಿಗದಿಪಡಿಸುವುದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಓದುತ್ತಾರೆಂದು ಇಲಾಖೆಯ ಅಧಿಕಾರಿಒಬ್ಬರು ಅಭಿಪ್ರಾಯಪಟ್ಟರು.
ಈವರೆಗೆ ವಿದ್ಯಾರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದಾಗಿತ್ತು. ಆದರೆ ಹೊಸ ಪದ್ಧತಿ ಜಾರಿಗೆ ಬಂದರೆ ಇದಕ್ಕೆ ಕಡಿವಾಣ ಬೀಳಲಿದೆ. ಎಸ್ಸೆಸ್ಸೆಲ್ಸಿಯಲ್ಲಿ ಇದೇ ರೀತಿ ಆರು ಬಾರಿ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡುವ ಪದ್ಧತಿ ಜಾರಿಗೆ ಬಂದಿದೆ. ಅದನ್ನು ಆಧರಿಸಿ ಪದವಿಪೂರ್ವ ಇಲಾಖೆಯೂ ಬದಲಾವಣೆ ತರಲು ಹೊರಟಿದೆ. ಇದು ಜಾರಿಗೆ ಬಂದರೆ ನಿಗದಿತ ಆರು ಅವಧಿಯಲ್ಲಿ ಪಾಸಾಗದಿದ್ದರೆ ಮತ್ತೆ ಪರೀಕ್ಷೆಗೆ ಕೂರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Please See Prajavani http://www.prajavani.net/web/include/story.php?news=30353§ion=2&menuid=10
No comments:
Post a Comment